ಕೀರ್ತನೆಗಳು - ಅಧ್ಯಾಯ 14

123456789101112131415161718192021222324252627282930313233343536373839404142434445464748495051525354555657585960616263646566676869707172737475767778798081828384858687888990919293949596979899100101102103104105106107108109110111112113114115116117118119120121122123124125126127128129130131132133134135136137138139140141142143144145146147148149150
← ಹಿಂದಿನ ಮುಂದಿನ →
1 ದೇವರಿಲ್ಲವೆಂದು ಮೂರ್ಖನು ತನ್ನ ಹೃದಯದಲ್ಲಿ ಹೇಳಿಕೊಂಡಿದ್ದಾನೆ. ಅವರು ಕೆಟ್ಟುಹೋಗಿ ಅಸಹ್ಯವಾದ ಕೃತ್ಯಗಳನ್ನು ಮಾಡಿದ್ದಾರೆ; ಒಳ್ಳೇದನ್ನು ಮಾಡುವವನು ಯಾವನೂ ಇಲ್ಲ.
2 ದೇವರನ್ನು ಹುಡುಕುವ ಬುದ್ಧಿವಂತನು ಇದ್ದಾನೋ ಎಂದು ನೋಡುವದಕ್ಕೆ ಕರ್ತನು ಆಕಾಶದಿಂದ ಮನುಷ್ಯನ ಮಕ್ಕಳ ಮೇಲೆ ಕಣ್ಣಿಟ್ಟನು.
3 ಅವರೆಲ್ಲರೂ ತಪ್ಪಿಹೋಗಿದ್ದಾರೆ, ಅವರೆಲ್ಲರೂ ಏಕವಾಗಿ ಹೊಲೆ ಯಾಗಿದ್ದಾರೆ; ಒಳ್ಳೆಯದನ್ನು ಮಾಡುವವನು ಇಲ್ಲ; ಒಬ್ಬನಾದರೂ ಇಲ್ಲ.
4 ಕರ್ತನನ್ನು ಪ್ರಾರ್ಥಿಸದೆ ರೊಟ್ಟಿಯನ್ನೋ ಎಂಬಂತೆ ನನ್ನ ಜನರನ್ನು ತಿಂದು ಅಪರಾಧಮಾಡಿದವರಿಗೆ ತಿಳುವಳಿಕೆಯಿಲ್ಲವೋ?
5 ಅಲ್ಲಿ ಅವರು ಭಯಭ್ರಾಂತ ರಾದರು; ಯಾಕಂದರೆ ದೇವರು ನೀತಿವಂತರ ಸಂತತಿ ಯಲ್ಲಿ ಇದ್ದಾನೆ.
6 ಕರ್ತನು ಬಡವನ ಆಶ್ರಯವಾಗಿರು ವದರಿಂದ ನೀವು ಅವನ ಆಲೋಚನೆಯನ್ನು ನಾಚಿಕೆ ಪಡಿಸಿದ್ದೀರಿ.
7 ಚೀಯೋನಿನಿಂದ ಇಸ್ರಾಯೇಲಿನ ರಕ್ಷಣೆಯು ಬರಲಿ; ಕರ್ತನು ತನ್ನ ಜನರನ್ನು ಸೆರೆಯಿಂದ ತಿರಿಗಿ ಬರಮಾಡುವಾಗ ಯಾಕೋಬನು ಉಲ್ಲಾಸಿ ಸುವನು, ಇಸ್ರಾಯೇಲನು ಸಂತೋಷಿಸುವನು.
← ಸೂಚಿಗೆ ಹಿಂದಿರುಗಿ